ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡಿಹಾಳ ಬ್ಲಾಗ್ ಗೆ ಸ್ವಾಗತ...


Wednesday, July 22, 2020

ನಮ್ಮದೇ ಬೆಳಕು.....

ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಭೇಟಿಯಾದರು. ಜೊತೆಗೆ ನಡೆಯತೊಡಗಿದರು ದೂರದ ದಾರಿ ಒಬ್ಬನ ಕೈಯಲ್ಲಿ ಬೆಳಕಿನ ದೀಪವಿತ್ತು ಇನ್ನೊಬ್ಬನಿಗೆ ಸಮಾಧಾನವಾಯಿತು ನಡೆಯುತ್ತ ಹೋಗುವಾಗ ಕತ್ತಲೆ ಯಾದರೆ ದೀಪವಿದೆಯಲ್ಲ ಅವರು ಅಂದುಕೊಂಡಂತೆ ಮುಂದೆ ಸ್ವಲ್ಪ ಹೊತ್ತಿಗೆ ಸೂರ್ಯ ಪಶ್ಚಿಮಕ್ಕೆ ಇಳಿಯತೊಡಗಿದ  ಬೆಳಕು ಕಡಿಮೆಯಾಗತೊಡಗಿತು. ದೀಪ ಹೊತ್ತು ತಂದವ ನಿಗಂತು ಯಾವ ಭಯವೂ ಇಲ್ಲ,ಇನ್ನೊಬ್ಬನಿಗೂ ಚಿಂತೆಯಿಲ್ಲ ಇಬ್ಬರ ನಡುವೆ ದೀಪ ಹಿಡಿದು ನಡೆದ ರಾಯಿತ ಇಬ್ಬರಿಗೂ ಅನುಕೂಲವೇ,ಮುಂದಷ್ಟು ದಾರಿ ಸವೆದಾಗ ಕಾಳ ಕತ್ತಲೆ ಇವರನ್ನು ಸುತ್ತುವರೆಯಿತು. ಆದರೆ ಯಾವ ಚಿಂತೆಯೂ ಇಲ್ಲ ಯಾಕೆಂದರೆ ದಾರಿ ತೋರಲು ದೀಪವಿದೆ ಜೊತೆಗೊಬ್ಬ ಸ್ನೇಹಿತನಿದ್ದಾನೆ.ಆದರೆ ರಾತ್ರಿ ಸುಮಾರು 12ರ ಸಮೀಪ ಬಂದಾಗ ರಸ್ತೆ ಎರಡಾಯ್ತು. ದಾರಿಯ ಕೊಂಬೆ ತುದಿಗೆ ಬಂದಾಗ ದೀಪ ತಂದವ ಕೇಳಿದ ನೀವು ಹೋಗುವುದು ಯಾವ ದಾರಿಯಲ್ಲಿ ಇನ್ನೊಬ್ಬ ನನ್ನದು ಬಲಗಡೆಯ ದಾರಿ ಎಂದ ಹೌದೇ?ನನ್ನದು ಎಡಗಡೆಯ ದಾರಿ ಹೀಗೆ ಸಾಗಿದರೆ ಎರಡು ಮೈಲಿ ಯಲ್ಲಿ ನನ್ನ ಮನೆ ಬರುತ್ತದೆ ಎಂದ ದೀಪದವ. ಆಯ್ತು ಹೋಗಿ ಬನ್ನಿ ಮತ್ತೆ ಭೇಟಿಯಾಗೋಣ ಎಂದು ಈತ ಬಲಗಡೆಗೆ ತಿರುಗಿ ಹತ್ತು ಹೆಜ್ಜೆ ಹಾಕಿದ ಮುಂದೆ ಹೆಜ್ಜೆ ಕಾಣದಷ್ಟು ಕತ್ತಲೆ ಹಿಂತಿರುಗಿ ನೋಡಿದ ದೀಪ ಹಿಡಿದ ಸ್ನೇಹಿತ ನಿರಾಳವಾಗಿ ದೊಡ್ಡ ಹೆಜ್ಜೆಹಾಕುತ್ತ ತಾನು ತಂದಿದ್ದ ದೀಪದ ಬೆಳಕಿನಲ್ಲಿ ನಡೆದಿದ್ದ.

ಮುಂದೆ ನಡೆದಂತೆ ಪ್ರವಾಸ ಕಷ್ಟವಾಯಿತು ಕಣ್ಣು ಉಜ್ಜಿದರು ಏನೇನೂ ಕಾಣುತ್ತಿಲ್ಲ. ಮುಂದೆ ಕಾಲಿಡಲು ಭಯ ಆಗ ಆತನಿಗೆ ಎನ್ನಿಸಿತು ನಾನು ದೀಪ ತಂದಿದ್ದರೆ ಚೆನ್ನಿತ್ತು, ಗೆಳೆಯನ ಬಳಿ ದೀಪವಿದೆಯಲ್ಲ ಎಂಬ ನಂಬಿಕೆಯಲ್ಲಿ ನಿರಾಳವಾಗಿದ್ದ ಈತನಿಗೆ ದೀಪ ಹೋದಾಗಲೇ ತನ್ನ ಸ್ವಂತ ದೀಪದ ಅವಶ್ಯಕವಾದದ್ದು ಆಗ ಚಿಂತಿಸಿದ ದೂರದ ಪ್ರಯಾಣ ಎಂದು ತಿಳಿದಿದ್ದರು ನಾನೇಕೆ ಒಂದು ದೀಪ ತರಲಿಲ್ಲ ಗೆಳೆಯನನ್ನು ಕೇಳಿಯಾದರೂ ಒಂದು ದೀಪ ಪಡೆಯಲಿಲ್ಲ ದಾರಿಯಲ್ಲಿ ಅನೇಕ ಹಳ್ಳಿಗಳು ಬಂದರೂ ಅಲ್ಲಿ ಒಂದು ದೀಪ ಕಂಡುಕೊಳ್ಳಬೇಕೆಂದು ತಲೆಗೆ ಹೊಳೆಯಲಿಲ್ಲ ಯಾವಾಗಲೂ ಎಷ್ಟೇ ಸಣ್ಣ ದೀಪವಾದರೂ ಅದು ನನ್ನದೇ ಆಗಿದ್ದರೆ ಕತ್ತಲೆಯಲ್ಲಿ ಕಾಪಾಡುತ್ತದೆ ಮತ್ತೊಬ್ಬರ ಅತ್ಯಂತ ಪ್ರಖರವಾದ ಬೆಳಕು ಎಂದಿಗೂ ನನ್ನನ್ನು ಸದಾ ಕಾಪಾಡಲಾರದು. ಅದರೊಂದಿಗೆ ಅದರೊಂದಿಗೆ ಇದ್ದಾಗ ನನ್ನ ಸ್ವಂತದ ದೀಪದ ಅವಶ್ಯಕತೆ ತೋರುವುದಿಲ್ಲ ಅದು ಶಾಶ್ವತವಲ್ಲ ಎಂಬ ತಿಳುವಳಿಕೆ ಮೂಡುವುದಿಲ್ಲ ಹೀಗೆ ಚಿಂತಿಸುತ್ತಾ ದೀನನಾಗಿ ರಸ್ತೆಯ ಬದಿಯಲ್ಲಿ ಕುಳಿತುಬಿಟ್ಟ.

ನಾವು ಮತ್ತೊಬ್ಬರ ಜ್ಞಾನದ ಮೇಲೆ ಶಕ್ತಿಯ ಮೇಲೆ ಅಧಿಕಾರದ ಮೇಲೆ ತುಂಬಾ ನಂಬಿಕೆ ಇಟ್ಟು ಸದಾಕಾಲ ಅದನ್ನು ಕಾಪಾಡುತ್ತದೆ ಎಂದು ಭಾವಿಸುವುದು ದೀಪ ತಾರದ ಗೆಳೆಯನ ತರಹದ ಚಿಂತನೆ. ನಾವಾಗಿಯೇ ಪ್ರಯತ್ನದಿಂದ ಪಡೆದ ಜ್ಞಾನ ಶಕ್ತಿ ಅಧಿಕಾರಗಳು ನಮ್ಮನ್ನು ಸದಾಕಾಲ ರಕ್ಷಿಸುತ್ತವೆ ಭ್ರಮೆಗಳನ್ನು ಹುಟ್ಟಿಸುವುದಿಲ್ಲ ನಮ್ಮ ಜೀವನದಲ್ಲಿ ಕಷ್ಟಗಳ ಆಪತ್ತುಗಳ ಕತ್ತಲೆ ಕವಿದಾಗ ನಮ್ಮನ್ನು ಕಂಗೆಡಿಸಿದೆ ಕಾಪಾಡುತ್ತವೆ.

ಕೃಪೆ:ಗುರುರಾಜ್ ಕರ್ಜಗಿ ಅವರ ಲೇಖನ

No comments:

Post a Comment